Tuesday, May 22, 2012

ಕ್ರಿಕೆಟ್ ಒಂದು ಧರ್ಮ..


ಶನಿವಾರದ ಸಂಜೆಯ 6 ಘಂಟೆ, ಮೈಸೂರಿನ ಶುಷ್ಕ ಹವೆಯ ಹಾವಳಿಗೆ ಮನಸ್ಸು ಹಳೆಯ “Saturday Night” ಹಾಡೊಂದನ್ನು ಗುನುಗುನಿಸುತ್ತಿತ್ತು, But ಹೊಸತನದ feeling ಇರಲಿಲ್ಲ, ಇವತ್ತೇಕೋ ನನ್ನ ಈ ಪುಟ್ಟ ಜಗತ್ತು ಬೇಜಾರೆನಿಸುತ್ತಿತ್ತು. TV ಯಲ್ಲಿ  IPL ಮ್ಯಾಚ್ ನೋಡುತ್ತಿದ್ದೆ, ಹಾಗೆಯೇ ಮನಸ್ಸು ಯೋಚನೆಯ ಲಹರಿಯಲ್ಲಿ ಮುಳಗತೊಡಗಿತು – “ಕ್ರಿಕೆಟ್ ಒಂದು ಧರ್ಮ”. 

ಚಿಕ್ಕಂದಿನಿಂದಲೂ ನಾನು ಯಾವುದೇ Pre-Defined ಸಿದ್ಧಾಂಥಗಳನ್ನು ರೂಡಿಸಿಕೊಂಡಿರಲಿಲ್ಲ, But ಇತ್ತಿಚ್ಚಿಗೆ ನನ್ನಲ್ಲಿ ಜಾತಿ-ಧರ್ಮ ಹಾಳು-ಮುಳೂ ಇವುಗಳನ್ನು ನಂಬದಿರುವ, ಮತ್ತು ನಂಬುವವರನ್ನೂ ದ್ವೇಷಿಸುವ ಹೊಸ ಖಯಾಲಿಯೊಂದು ಶುರುವಾಗಿತ್ತು. ಖಾಸಗಿ ಯೋಚನೆಗಳೆಲ್ಲ ಮುಗಿದ ನಂತರದ ಖಾಲಿ ಮನಸ್ಸಿನ ಹುಚ್ಚುತನ,

ಯಾವತ್ತೋ ಒಂದು ದಿನ Holiday Mood ನಲ್ಲಿ ದೇಶಪ್ರೇಮವನ್ನು Celebrate ಮಾಡುವ ನಮ್ಮಂತವರನ್ನು ಈ ದೇಶ ಏನನ್ನು ಕೇಳದೆಯೇ,  ಹಾಗೇ ಸುಮ್ಮನೆ ನಮ್ಮನ್ನು ನಮ್ಮ ಇಷ್ಟದಂತೆ ಬದುಕಲು ಬಿಟ್ಟಿದೆ. ಇಂತಹ ದೇಶದಲ್ಲಿ, ಚಿಕ್ಕಂದಿನಿಂದಲೂ ನಮ್ಮ ಜೊತೆಯಾಗಿ ಬೆಳೆದು, ಆಟೋ ಓಡಿಸುವ, ಹೂ ಮಾರುವ, ಮಸೀದಿ ಆಸು ಪಾಸಿನಲ್ಲಿ ಸಿಗುವ, Weekends ನಲ್ಲಿ ರುಚಿಕರ ಚಿಕನ್ ಮಾಡಿ ನಮಗೆ ಬಡಿಸುವ, ಕಾಲೇಜ್ ನಲ್ಲಿ ನಮ್ಮ ಜೊತೆಯಾಗಿ ಓದುವ, ಕೆಸಲದಲ್ಲಿ ಬೆರೆಯುವ, ನಮ್ಮವರೇ ಅನ್ನಿಸುವ, ಫ್ರೆಂಡ್ಸ್ ತರಹ ಕಾಣಿಸುವ ಸಾತ್ವಿಕ ಮುಸ್ಲಿಂಗಳೇ ಬೇರೆ. ಮನುಷ್ಯತ್ವ ಮರೆತು, ಧರ್ಮ ಯುದ್ಧ ಮಾಡಲೇಬೇಕು ಎಂದು, ಇದೇ ಇಸ್ಲಾಂ ಧರ್ಮದ ಧ್ಯೇಯ ಅಂದುಕೊಳ್ಳುವ ಮತಾಂಧ ಮುಸ್ಲಿಂಗಳೇ ಬೇರೆ! 

ಕ್ರಿಕೆಟ್ ಒಂದು ಧರ್ಮ ಅನ್ನುವುದೇ ನಿಜವಾದರೆ, ಕಾಳಿ ಮಾತೆಯ ಆರಾಧನೆಯ, ನಮ್ಮದೇ ದೇಶದ ಭಾಗವಾಗಿರುವ, ಕೋಲ್ಕತಾ (KKR) Team ಅನ್ನು ದ್ವೇಷಿಸುವಂತೆ ಈ ಜನರನ್ನು ಪ್ರೇರಪಿಸುವ  ಆ ಸಂಕುಚಿತ ಭಾವಗಳಾದರೂ ಯಾವವು?, ಶಾರುಕ್ಖಾನ್ ಎಂಬ ಮುಸ್ಲಿಂ Team ನ Co-owner ಆಗಿರುವುದಾ? ಅಥವಾ ವಾಸಿಂ ಆಕ್ರಂ ಎನ್ನುವ ಒಬ್ಬ ಮುಸ್ಲಿಂ Team ನ ಪ್ರಮುಖ ಬೌಲಿಂಗ್ Coach ಆಗಿರುವುದಾ?

ಇಲ್ಲಿ ಮುಸ್ಲಿಂ ಪರವಾಗಿ ಇಲ್ಲವೇ ವಿರೋಧವಾಗಿ  ಮಾತನಾಡುವ ಉದ್ದೇಶ ನನ್ನದಲ್ಲ, ಎಲ್ಲವನ್ನೂ, ಎಲ್ಲ ಕಾಲದಲ್ಲೂ ಒಂದೇ ಎಂದು ತಿಳಿದುಕೊಂಡು ಹೊರಟ ಜಗತ್ತಿನ ಈ ಅವಿವೇಕಿ ಮನಸ್ಸಿನ ಬಗ್ಗೆ ಆತಂಕವಿದೆ ಅಸ್ಟೆ.

ಎಲ್ಲೊ ಒಂದು ಮೂಲೆಯಲ್ಲಿ ಕುಳಿತು ಧರ್ಮ ಯುದ್ಧ ಮಾಡುವ ಜಿಹಾದಿಗಳಿಗೂ, ಭಾರತೀಯ ಮುಸ್ಲಿಂಗಳಿಗೂ ಹೋಲಿಕೆ ಏಕೆ? ಅರ್ಥವಿಲ್ಲದ ಅಲ್ಲಿನ ಧಾರ್ಮಿಕ ಕಟ್ಟಲೆಗಳೇ ಇಲ್ಲಿಯ ಮುಸ್ಲಿಂನಲ್ಲೂ ಸಹ ಇವೆ ಅಂದುಕೊಳ್ಳುವುದು ಎಷ್ಟು ಸರಿ? ಹೇಗೆ ಪರಿಸ್ತಿತಿ, ಪರಿಸರ, ವ್ಯಕ್ತಿಗತ ಇಚ್ಚೆ ಮತ್ತು ಅನುಕೂಲತೆಗಳಿಗೆ ತಕ್ಕಂತೆ ಭಾರತೀಯ ಧರ್ಮ ಬೇರೆ ಬೇರೆ ವಿಧಗಳಲ್ಲಿ, ಬೇರೆ ಬೇರೆ ದೇಶಗಳಲ್ಲಿ ಅಸ್ತಿತ್ವದಲ್ಲಿದೆಯೋ ಹಾಗೆಯೇ ಮುಸ್ಲಿಂ ಧರ್ಮವೂ ಸಹ! 

ಎಲ್ಲಿಂದಲೋ ಬಂದು ನಮ್ಮ ಪಾರ್ಲಿಮೆಂಟ್ ಮುಂದೆ ಬಾಂಬ್ ಸಿಡಿಸಿದ ಪಾಕ್ ಇಸ್ಲಾಮಿಕ್  ಭಯೋತ್ಪಾದಕರನ್ನು ನಮ್ಮ ದೇಶದ ಮುಸ್ಲಿಂ ಜೊತೆಗೆ ಹೋಲಿಸಿ ನೋಡಬೇಕಿಲ್ಲ, ಮತಾಂಧತೆಯ ರೋಗ ನಮಗೆ ಬೇಡ! ಇಷ್ಟಕ್ಕೂ ಇಲ್ಲಿರುವ ಮುಸ್ಲಿಂಗಳು ಯಾವತ್ತಿಗೂ ಇಂತಹ ವಿಷಯದಲ್ಲಿ ದಂಗೆ ಎದ್ದಿಲ್ಲ, May be ನಮ್ಮಲ್ಲಿ ಅವರಿಗಿರುವ Insecurity ಇದಕ್ಕೆ ಕಾರಣವಾಗಿರಬಹುದು.

ಭಾರತೀಯ ಸೈನ್ಯದಲ್ಲೂ ಸಹ ಮುಸ್ಲಿಂ ಯೋಧರು ನಮ್ಮ ದೇಶ ಕಾಯುತ್ತಿದ್ದಾರೆ, ಹೇಳುತ್ತ ಹೊರಟರೆ ಇಂತಹ ಸಾವಿರ ವಿಷಯಗಳಿವೆ, ನನ್ನ ಅನಿಸಿಕೆ ಇಸ್ಟೇ, ಇಲ್ಲಿಯ ಮುಸ್ಲಿಂಗಳನ್ನು  ಚರ್ಚೆಯ ವಸ್ತುವನ್ನಾಗಿಸದೆಯೇ ಅವರನ್ನು ನಮ್ಮವರನ್ನಾಗಿ ಮಾಡಿಕೊಳ್ಳಬೇಕು, ಅವರನ್ನೂ ಸಹ ಭಾರತಿಯರನ್ನಾಗಿ ಗುರುತಿಸಲು ಅವಕಾಶ ಮಾಡಿಕೊಡಬೇಕು. ಜಾಗತಿಕ ಮುಸ್ಲಿಂ ಉಗ್ರವಾದವನ್ನು ವಿರೋಧಿಸಿ ಏಕೆಂದರೆ ಮುಸ್ಲಿಂ ಮೂಲಭೂತ ವಾದ ಯಾವತ್ತಿಗೂ ಚರ್ಚೆಗೆ ಒಳಗಾಗುವ, ಅಪಾಯಕರ ಸಂಗತಿಯೇ, ಆದರೆ ಮುಸ್ಲಿಂಗಳನ್ನಲ್ಲ!


ಕ್ರಿಕೆಟ್ ಒಂದು Gentleman's game, ಅದು ಹಾಗಿರುವುದೇ ಆರೋಗ್ಯಕರ, ಇಂತಹದನ್ನು ಮುಸ್ಲಿಂ ಅನ್ನುವ ಒಂದು ಕ್ಷುಲ್ಲಕ  ಕಾರಣಕ್ಕೆ ಮತಾಂಧತೆಯಲ್ಲಿ ಪರಿಗಣಿಸುವುದು ಬೇಡ, ಏಕೆಂದರೆ ಕ್ರಿಕೆಟ್ ಎನ್ನುವುದು ಈ ದೇಶದಲ್ಲಿ ಒಂದು ಆಟವಲ್ಲ, ಅದೊಂದು ಸರ್ವ ಮತಗಳ ಧರ್ಮ!